Discover millions of ebooks, audiobooks, and so much more with a free trial

Only $11.99/month after trial. Cancel anytime.

Kurudu Thiruvu
Kurudu Thiruvu
Kurudu Thiruvu
Ebook218 pages1 hour

Kurudu Thiruvu

Rating: 0 out of 5 stars

()

Read preview

About this ebook

ಯತಿರಾಜ್ ವೀರಾಂಬುಧಿ

ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ.
1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ.
ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.)
ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ)
ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್.
ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!
LanguageKannada
Release dateAug 12, 2019
ISBN6580207001043
Kurudu Thiruvu

Read more from Yathiraj Veerambudhi

Related authors

Related to Kurudu Thiruvu

Related ebooks

Related categories

Reviews for Kurudu Thiruvu

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Kurudu Thiruvu - Yathiraj Veerambudhi

    http://www.pustaka.co.in

    ಕುರುಡು ತಿರುವು

    Kurudu Thiruvu

    Author :

    ಯತಿರಾಜ್ ವೀರಾಂಬುಧಿ

    Yathiraj Veerambudhi

    For more books

    http://www.pustaka.co.in/home/author/yathiraj-veerambudhi

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಕುರುಡು ತಿರುವು
    ಯತಿರಾಜ್ ವೀರಾಂಬುಧಿ

    KuruDu Thiruvu – A novel by Yathiraj Veerambudhi, 89, Chirasmitha, Pattanagere, Rajarajeshwarinagar, Bengaluru 560098

    ತಿರುವನ್ನು ಪ್ರವೇಶಿಸುವ ಮುನ್ನ...

    ಬೆಳಕಿರಲಿ, ಕತ್ತಲಿರಲಿ ... ಪ್ರವೇಶಿಸುವಾಗ ಇರಬೇಕಾದದ್ದು ಎದೆಗಾರಿಕೆ. ನಾನು ಕೂಡಾ ಒಮ್ಮೆ ದಾರಿಕಾಣದ ಪಥಿಕನಂತೆ ನಿಂತಿದ್ದಾಗ ಎದುರಾಗಿದ್ದು ಇಂತಹ ಕುರುಡು ತಿರುವೇ. ಕೆಟ್ಟಧೈರ್ಯದಿಂದ ಆ ತಿರುವನ್ನು ತಿರುಗಿದಾಗ ನನಗೆ ನಿರಾಸೆ ಎದುರಾಗಲಿಲ್ಲ. ಆ ಧೈರ್ಯವೇ ಮಾರ್ಗದರ್ಶಿಯಾಗಿ ಆ ಕಡೆ ನಿಂತು ನನಗೆ ಆಸರೆಯಾಗಿದ್ದು ನನ್ನ ಅದೃಷ್ಟವೆಂದೇ ಹೇಳಬೇಕು. ಇಂತಹ ತಿರುವು ಯಾರಿಗೆ ಎದುರಾದರೂ ಅವರು ಧೈರ್ಯವಾಗಿ ಅದನ್ನು ಪ್ರವೇಶಿಸಲಿ, ಅವರ ಅಭಿಲಾಷೆ ಈಡೇರಲಿ ಎನ್ನುವ ಹೆಬ್ಬಯಕೆ ನನ್ನದು.

    ಕಾದಂಬರಿಯ ನಾಯಕಿ ತೆಗೆದುಕೊಳ್ಳುವ ನಿರ್ಧಾರ, ಅವಳು ಪ್ರವೇಶಿಸುವ ಕುರುಡು ತಿರುವು ಎಲ್ಲವನ್ನೂ ಒಂದು ‘ಓಟ’ದ ಕಾದಂಬರಿಯಲ್ಲಿ ಚಿತ್ರಿಸಲು ಪ್ರಯತ್ನಿಸಿದ್ದೇನೆ.

    ನಿಮಗೆ ಇಷ್ಟವಾದರೆ ಎರಡು ಸಾಲ ಬರೆಯಿರಿ.

    ಯತಿರಾಜ್ ವೀರಾಂಬುಧಿ

    yathirajmv@gmail.com

    ಅರ್ಪಣೆ

    ಪ್ರತಿಯೊಬ್ಬ ಎದೆಗಾರಿಕೆಯುಳ್ಳ ವ್ಯಕ್ತಿಗೆ

    ಅವರ ಸು-ಪ್ರಯತ್ನ

    ಯಶಸ್ವಿಯಾಗಲಿ ಎನ್ನುವ

    ಅಭಿಲಾಷೆಯೊಂದಿಗೆ

    - ಯತಿರಾಜ್

    ಕುರುಡು ತಿರುವು

    ಎಂದಿಗಿಂತ ಸ್ವಲ್ಪ ಮುಂಚಿತವಾಗಿಯೇ ಎಚ್ಚರವಾಯಿತು ನರ್ಮದಳಿಗೆ. ‘ಅರೆ! ಕರೆಂಟೇ ಇಲ್ಲ’ ಎಂದುಕೊಳ್ಳುತ್ತಾ ಹಾಸಿಗೆ ಬಿಟ್ಟೆದ್ದಳು. ತನ್ನ ರೂಮಿನ ಬಾಗಿಲು ಇನ್ನೇನು ತೆರೆಯಬೇಕು ಎಂದುಕೊಳ್ಳುವಷ್ಟರಲ್ಲಿ ಇಬ್ಬರು ಮಾತಾಡುವ ಶಬ್ದ ಕೇಳಿಸಿತ್ತು. ಬೆಳಗಿನ ನಾಲ್ಕೂವರೆಯಲ್ಲಿ ಮಾತು? ಯಾರಿರಬಹುದು?

    ಅವರ ಮಾತುಗಳು ಪಿಸುಗುಟ್ಟುವಿಕೆಯಲ್ಲಿದ್ದರೂ ಅಯಾಚಿತವಾಗಿ ಅವುಗಳಲ್ಲಿ ಕೆಲವು ನರ್ಮದಳ ಕಿವಿಗಳನ್ನು ಸೋಕಿದ್ದವು. ಬೆಚ್ಚಿಬಿದ್ದಳು. ಖಂಡಿತ ಇದು ಸುಳ್ಳು. ಹಾಗೆಲ್ಲಾ ಯೋಚಿಸಲು ಅವರಿಗೆ ಹೇಗೆ ಸಾಧ್ಯ? ಅದರಲ್ಲೂ ಅವಳನ್ನು ಕೊಲ್ಲಬೇಕೆಂದು ಅವರು ವ್ಯೂಹ ರಚಿಸುತ್ತಾರೆಂದು ನಂಬುವುದು ಹೇಗೆ?

    ಅವಳ ದೊಡ್ಡ ತಮ್ಮ ಕೋದಂಡನ ಮಾತಿನ ನಡುವೆ ‘ಇನ್ಷೂರೆನ್ಸ್’ ಎಂಬ ಪದ ನುಸುಳಿ ಬಂದಿತ್ತು. ಓಹೋ! ಇದೇ ಅವರ ಆಸೆಯ ಬೀಗದ ಕೀಲಿಕೈ.

    ಶ್ವೇತಳೇನೂ ಕಡಿಮೆ ಇರಲಿಲ್ಲ. ಅವಳು ನರ್ಮದಾಳ ಕುತ್ತಿಗೆಯಲ್ಲಿದ್ದ ಚಿನ್ನದ ಲಾಕೆಟ್ ಬಗ್ಗೆ ಮಾತಾಡಿದ್ದು ನರ್ಮದಳ ಕಿವಿಯನ್ನು ತಲುಪಿಬಿಟ್ಟಿತ್ತು.

    ಏನದು ನಿಮ್ಮ ಪ್ಲಾನು? ಎಂದೆನ್ನುತ್ತಾ ಅಲ್ಲಿ ಮತ್ತೊಂದು ಧ್ವನಿ ಈಗ ಸೇರಿಕೊಂಡಿತ್ತು.

    ನೋಡು ಪಟ್ಟಾಭಿ, ನಿನಗೆ ನರ್ಮದಕ್ಕ ಅಂದ್ರೆ ಸ್ವಲ್ಪ ಪ್ರೀತಿ ಇದೇಂತ ನನಗ್ಗೊತ್ತು. ಆದ್ರೆ ನೀನು ನಿನ್ನ ಕೆಲಸ ನೋಡ್ಕೊಂಡು ಸುಮ್ಮನಿದ್ರೆ ಸರಿ. ನಿನಗೂ ಒಂದು ಪಾಲು ಕೊಡ್ತೀವಿ. ನೀನೇನಾದ್ರೂ ತಲೆ ಹಾಕಿದ್ಯೋ ನಿನ್ನ ಕಣ್ಣು ಕಿತ್ತು ನಿನ್ನ ಕೈಗೇ ಕೊಡ್ತೀವಿ ಕೋದಂಡನ ಮಾತು ಸ್ವಲ್ಪ ಬಿರುಸಾಗಿಯೇ ಕೇಳಿತ್ತು ಅಲ್ಲಿಯೇ ನಿಂತು ಕೇಳಿಸಿಕೊಳ್ಳುತ್ತಿದ್ದ ನರ್ಮದಳಿಗೆ.

    ನೋಡ್ರೀ! ನೀವು ಯಾರನ್ನು ಈ ಕೊಲೆ ಮಾಡಲು ಏರ್ಪಾಡು ಮಾಡ್ತೀರೋ ಅವರಿಗೆ ಹೇಳಿ. ನನಗೆ ಅವಳ ಕತ್ತಲ್ಲಿರೋ ಲಾಕೆಟ್ ಮಾತ್ರ ಬೇಕೇಬೇಕು ಎಂದಿದ್ದಳು ಶ್ವೇತಾ.

    ನರ್ಮದ ವಿಹ್ವಲಳಾಗಿ ನಿಂತಿದ್ದಳು. ಅವಳ ಕಾಲ್ಗಳು ನೆಲಕ್ಕೆ ಅಂಟಿಕೊಂಡುಬಿಟ್ಟಿದ್ದವು. ಇದೇನಾ ಅನುಬಂಧ ಎನ್ನುವ ಶಬ್ದಕ್ಕಿರುವ ಅರ್ಥ? ಇವರೇನಾ ನನ್ನ ತಮ್ಮಂದಿರು? ಇವರೇನಾ ನನ್ನ ಸೆರಗು ಹಿಡಿದು, ‘ಅಕ್ಕಾ ಹಸಿವೆ ಊಟ ಕೊಡು’ ಎಂದು ಗೋಗರೆಯುತ್ತಾ ನನ್ನ ಹಿಂದೆ ತಿರುಗುತ್ತಿದ್ದ ಪುಟ್ಟ ತಮ್ಮಂದಿರು? ಅನ್ನ ಹಾಕಿದ್ದ ಕೈಯನ್ನು ಈವತ್ತು ಕತ್ತರಿಸಲು ತಂತ್ರ ಮಾಡುತ್ತಿರುವ ಇವರೇನಾ ನನ್ನ ಒಡಹುಟ್ಟಿದವರು?

    ಇನ್ನು ಶ್ವೇತ... ಮಲತಾಯಿಯ ಬಳಿ ದಿನವೂ ಒದೆ ತಿನ್ನುತ್ತಾ, ಸದಾ ಅಳುತ್ತಾ ತಿರುಗುತ್ತಿದ್ದ ಶ್ವೇತಳಿಗೆ ಆಸರೆಯಾಗೋಣವೆಂದು ತನ್ನ ತಮ್ಮ ಕೋದಂಡನಿಗೆ ತಂದುಕೊಂಡಿದ್ದಳು ನರ್ಮದ. ಬಡವರ ಮನೆಯ ಹುಡುಗಿ ತುಂಬಾ ಹೊಂದಿಕೊಂಡು ಹೋಗುತ್ತಾಳೆ ಎನ್ನುವ ಕೆಟ್ಟನಂಬಿಕೆಯೊಂದಿಗೆ ತನ್ನ ಅತ್ತಿಗೆಯನ್ನಾಗಿ ತಂದುಕೊಂಡಿದ್ದಕ್ಕೆ ಈವತ್ತು ನನ್ನನ್ನೇ ಕೊಲ್ಲುವ ಪ್ಲಾನ್‍ನಲ್ಲಿ ಶಾಮೀಲಾಗಿದ್ದಾಳೆ.

    ಕಪ್ಪು ಮನಸ್ಸಿನ ಶ್ವೇತ!

    ನಾನಿನ್ನು ಹೊರಟೆ.ನಾನು ನನ್ನ ಆಫೀಸ್ ಬಿಟ್ಟು ಈವತ್ತು ಹೊರಗೆ ಬರೋಲ್ಲ. ಸಂಜೆಯೋ, ರಾತ್ರಿಯೋ ಸುದ್ದಿ ಬರೋವರ್ಗೂ ನಾನಲ್ಲೇ ಇರ್ತೀನಿ. ನಿಮ್ಮಲ್ಲಿ ಯಾರಿಗೆ ಮೊದಲು ಸುದ್ದಿ ಸಿಕ್ಕಿದರೂ ತಕ್ಷಣವೇ ಫೋನ್ ಮಾಡಿ. ಬಂದುಬಿಡ್ತೀನಿ’ ಎನ್ನುತ್ತಿದ್ದ ಕೋದಂಡ. ಪಟ್ಟಾಭೀ, ನೀನು ಕೂಡಾ ಯಾರಾಧ್ರೂ ಫ್ರೆಂಡ್ ಜೊತೆ ಇದ್ಬಿಡು. ಶ್ವೇತ! ನೀನು ನಿನ್ನ ಚಿಕ್ಕಮನ ಮನೇಗ್ಹೋಗಿರು. ಅಲ್ಲಿ ಬೈಗುಳ ತಿಂದ್ರೂ ಸರಿಯೇ. ಅಲ್ಲೇ ಇರು. ಯಾಕೇಂದ್ರೆ ನಾವು ಅಲ್ಲಲ್ಲೇ ಇದ್ವೀಂತ ಸಾಕ್ಷಿ ಬೇಕು"

    ಅಂದರೆ ಅವಳ ಸಾವಿನ ಹೊತ್ತಿನಲ್ಲಿ ದೂರದಲ್ಲಿದ್ದೆವು ಎನ್ನುವ ಪುರಾವೆ ಬೇಕು. ಜೊತೆಗೆ ತಾನವರನ್ನು ಬಹಳ ಪ್ರೀತಿಸುತ್ತೇನೆಂಬ ಪುರಾವೆ ಅಳಿಸಿ ಹೋಗಬೇಕು, ಶಾಶ್ವತವಾಗಿ. ನರ್ಮದಾಳಿಗೆ ದುಃಖ ಉಕ್ಕಿ ಬಂತು.

    ಪ್ಲಾನ್ ಏನೂಂತ ಹೇಳ್ಳೇ ಇಲ್ಲ? ಎಂದ ಪಟ್ಟಾಭಿ.

    ... ಅನ್ನೋವ್ರು ನವರ್iದಕ್ಕ ಎಲ್ಲೇ ಹೋದ್ರೂ ಫಾಲೋ ಮಾಡ್ತಾರೆ. ಅವಕಾಶ ಎಲ್ಲಿ ಸಿಕ್ಕಿದರೆ ಅಲ್ಲೇ ಮುಗಿಸಿಬಿಡ್ತಾರೆ. ಮನೇಲೋ, ಆಫೀಸಲ್ಲೋ, ಬೇರೆಲ್ಲೋ ನಮಗೆ ಸರಿಯಾಗಿ ಗೊತ್ತಿಲ್ಲ. ಆದ್ರೆ ರಾತ್ರಿ ಅಕ್ಕ ಮನೆಗೆ ವಾಪಸ್ಸು ಬರೋದ್ರೊಳ್ಗೆ

    ನರ್ಮದಳ ಮುಖ ಬಿಳಿಚಿಕೊಂಡಿತ್ತು. ಯಾರು ತನ್ನನ್ನು ಕೊಲ್ಲಲು ಬರುತ್ತಿರುವರೆಂದು ಮಾತ್ರ ತಿಳಿಯಲಿಲ್ಲ. ಯಾಕೆಂದರೆ ಕೋದಂಡ ಆ ಹೆಸರನ್ನು ಬಹಳ ಮೆಲ್ಲಗೆ ಹೇಳಿದ್ದ.

    ಅದು ಮುಖ್ಯವೆಂದೂ ಅವಳಿಗೆ ಅನ್ನಿಸಲಿಲ್ಲ. ಅವಳೀಗ ಆಪತ್ತಿನಲ್ಲಿ ಸಿಲುಕಲಿದ್ದಾಳೆ. ಇಷ್ಟು ಹೊತ್ತೂ ಕೆಟ್ಟ ಕನಸಿನಂತೆ ಅವಳ ಕಿವಿಗಳ ಮೇಲೆ ಬಿದ್ದ ಆಘಾತಶರಗಳು ಅವಳನ್ನು ಬಲಹೀನಳನ್ನಾಗಿ ಮಾಡಿದ್ದರಿಂದ ಅವಳು ಹಿಡಿದುಕೊಂಡಿದ್ದ ಸ್ವಲ್ಪವೇ ತೆರೆದುಕೊಂಡಿದ್ದ ಬಾಗಿಲು ‘ಕಿರ್ರ್’ ಎಂದು ಶಬ್ದ ಮಾಡಿಯೇ ಬಿಟ್ಟಿತು.

    ನಿಶ್ಶಬ್ದದ ಆ ಸಮಯದಲ್ಲಿ ಆ ‘ಕಿರ್ರ್’ ಸದ್ದು ಜೋರಾಗಿಯೇ ಕೇಳಿಸಿತ್ತು. ಅಲ್ಲಿ ನಿಂತಿದ್ದ ಮೂವರಿಗೂ ಅಕ್ಕ ಎದ್ದೇಳುವ ಸಮಯವಾಯಿತೆಂದು ಅಲ್ಲಿಂದ ಜಾಗ ಖಾಲಿ ಮಾಡಿದರೇ ಹೊರಡು ನರ್ಮದ ಎದ್ದಿರುವಳೆಂದಾಗಲೀ ತಮ್ಮ ಮಾತುಗಳನ್ನು ಕೇಳಿಸಿಕೊಂಡಿರುವಳೆಂದಾಗಲೀ ಅವರಿಗೆ ತಿಳಿಯಲಿಲ್ಲ.

    ರೂಮಿನಿಂದಾಚೆಗೆ ಬಂದ ನರ್ಮದ ಕತ್ತಲಲ್ಲಿ ತಡವರಿಸಿಕೊಂಡು ಬಾತ್‍ರೂಮಿನತ್ತ ನಡೆದಳು. ಮನದಲ್ಲಿ ಕೋಲಾಹಲವೆದ್ದಿತ್ತು. ಇದೆಂತಹ ವೈಪರೀತ್ಯ? ತಮ್ಮಂದಿರೇ ಅಕ್ಕನನ್ನು ಕೊಲ್ಲಲು ಎಲ್ಲಾದರೂ ಯೋಚನೆ ಮಾಡುತ್ತಾರೆಯೇ?

    ಬಾತ್‍ರೂಮಿನಲ್ಲಿ ತಾನೇ ನೆನೆಸಿಟ್ಟಿದ್ದ ಬಟ್ಟೆಗಳಿದ್ದ ಬಕೆಟ್ಟನ್ನು ಎತ್ತಿಕೊಂಡು ಹಿತ್ತಿಲಿಗೆ ನಡೆದಳು. ತಾನೆಂದರೆ ಇಷ್ಟವಿಲ್ಲದಿದರೂ ತಾನು ಮಾಡುವ ಕೆಲಸಗಳ ಬಗ್ಗೆ ಅವರುಗಳಿಗೇನೂ ಬೇಸರವಿಲ್ಲ. ನಾಳೆಯಿಂದ ಯಾರು ಒಗೆಯುತ್ತಾರೋ ಏನೋ!  ಈವತ್ತೇ ಈ ಮನೆಯಲ್ಲಿ ಕೊನೆಯ ಸಲ ಕೆಲಸ ಮಾಡುತ್ತಿರುವಳೋ ಏನೋ! ಯಾರಿಗೆ ಗೊತ್ತು, ನಾಳೆಯಿಂದ ಯಾರನ್ನಾದರೂ ಕೆಲಸಕ್ಕಿಟ್ಟುಕೊಳ್ಳುವರೋ ಏನೋ... ಹೇಗೂ ತನ್ನ ಸಾವು ಅವರಿಗೆ ಹಣ ತಂದುಕೊಡಲಿದೆ..!

    ಸಾವು ಎಂಬ ಶಬ್ದ ನೆನಪಾದೊಡನೆ ಅವಳ ಮುಖ ಮ್ಲಾನವಾಯಿತು. ಹೌದು, ತನ್ನ ಜೀವವಿಮೆಯ ಹಣ. ಅದನ್ನು ತಾನು ತನ್ನ ತಮ್ಮಂದಿರಾದ ಪಟ್ಟಾಭಿ, ಕೋದಂಡರ ಹೆಸರಿನಲ್ಲಿ ನಾಮಿನೇಷನ್ ಮಾಡಿಸಿದ್ದಾಳೆ. ಆದರೂ ಅವಳಿಗೆ ಪಟ್ಟಾಭಿಯ ಮೇಲೆ ಸ್ವಲ್ಪ ಕನಿಕರವಿದೆ. ಅವನ ಅಣ್ಣ ಅತ್ತಿಗೆ ಅವನಿಗೆ ಮೋಸ ಮಾಡಿ ಅವನ ಕೈಗೆ ಚಿಪ್ಪು ಕೊಟ್ಟರೂ ಅಚ್ಚರಿ ಪಡಬೇಕಿಲ್ಲ. ಅದರಲ್ಲೂ ಶ್ವೇತ... ಅಬ್ಬಾ! ದೇವರು ನಿಜವಾಗಿಯೂ ಎಂತೆಂತಹ ಸೃಷ್ಟಿಗಳನ್ನು ಮಾಡುತ್ತಾನೆ!

    ಬಟ್ಟೆ ಒಗೆದು ಮುಗಿಸಿ, ತನ್ನ ಪ್ರಾತಃವಿಧಿಗಳನ್ನು ತೀರಿಸಿಕೊಂಡು ದೇವರ ಮನೆಗೆ ಬಂದಳು ನರ್ಮದ. ಆ ಮನೆಯಲ್ಲಿನ ಅವಳ ಅತ್ಯಂತ ಪ್ರಿಯವಾದ ತಾಣ. ಆ ಜಗನ್ನಿಯಾಮಕನ ಮೂರ್ತಿಯ ಮುಂದೆ ಅವಳು ಸ್ವಲ್ಪ ಧೈರ್ಯಗೊಂಡಳು. ಆದರೆ ಅವನು ತನ್ನನ್ನು ಈ ಕುತ್ತಿನಿಂದ ಪಾರು ಮಾಡುವನೇ?

    ಈಗ ತಾನಿಲ್ಲಿಂದ ಓಡಿ ಹೊರಟುಹೋಗಬೇಕು. ಎಲ್ಲಿಗೆ ಹೋಗಲಿ? ತನಗಾಗಿ ಕಾದಿರುವವರು ಯಾರಾದರೂ ಇದ್ದಾರಾ ಈ ಪ್ರಪಂಚದಲ್ಲಿ? ಎಷ್ಟು ಹೊತ್ತಿಗೆ ಹೊರಡಬೇಕು ತಾನಿಲ್ಲಿಂದ? ಪ್ರಶ್ನೆಗಳು ಸಾಲಾಗಿ ತಲೆಯಲ್ಲಿ ಸುಳಿದವೇ ಹೊರತು ಉತ್ತರ ಮಾತ್ರ ಶೂನ್ಯ.

    ಸುಮಾರು ಅರ್ಧಗಂಟೆ ಕಾಲ ತಲೆಕೆಡಿಸಿಕೊಂಡ ಮೇಲೆ ಹೊಳೆದಿದ್ದು ಒಂದೇ ಹೆಸರು. ಕೈಲಾಸ್!

    ಹೌದು. ಮೈಸೂರಿನಲ್ಲಿರುವ ಕೈಲಾಸ್ ತನಗೆ ಸಹಾಯ ಮಾಡಬಲ್ಲರು. ಯಾಕೆ ಮಾಡಬಲ್ಲರು ಎಂದು ವಿವೇಕ ಕೇಳಿದಾಗ ಮನಸ್ಸು ನಾಚಿ ಉತ್ತರಿಸಿತು. ಒಂದು ಕಾಲದಲ್ಲಿ ತಾನೆಂದರೆ ಆತ ತುಂಬಾ ಇಷ್ಟ ಪಡುತ್ತಿದ್ದರು... ಈಗ ಮೈಸೂರನ್ನು ತಲುಪುವುದು ಹೇಗೆ? ಅದೂ ಮನೆಯವರಿಗೆ ತಿಳಿಯದ ಹಾಗೆ?

    ರೂಮಿನೊಳಗೆ ಹೋದಳು ನರ್ಮದ. ಆ ರೂಮು ಅವಳಿಗೆ ವಿಚಿತ್ರವಾಗಿ ಕಾಣಿಸಿತ್ತು. ಕೋದಂಡನ ಮದುವೆಯಾಗುವವರೆಗೂ ತಾನೇ ಆ ರೂಮಿನಲ್ಲಿ ವಾಸಿಸುತ್ತಿದ್ದಳು. ಶ್ವೇತ ಈ ಮನೆಗೆ ಸೊಸೆಯಾಗಿ ಬಂದ ಮೇಲೆ ತಾನಾಗಿಯೇ ಮನೆಯಲ್ಲಿ ಹಿತ್ತಿಲಿಗೆ ಹತ್ತಿರವಾಗಿದ್ದ ಲಂಬರ್ ರೂಮಿಗೆ ತನ್ನ ವಾಸ್ತವ್ಯವನ್ನು ಬದಲಾಯಿಸಿಕೊಂಡಿದ್ದಳು. ಒಂದು ಹಾಸಿಗೆ, ಒಂದು ಪುಟ್ಟ ಡೆಸ್ಕ್ – ಯಾವಾಗಲಾದರೂ ಏನಾದರೂ ಬರೆಯಬೇಕೆಂಬ ಲಹರಿ ಉಂಟಾದಾಗ ಅಥವಾ ಮಲಗುವಾಗಲಷ್ಟೇ ಆ ರೂಮಿನಲ್ಲಿರುತ್ತಿದ್ದುದು.

    ಗಡಿಯಾರ ಬಿಮ್‍ಬಾಮ್ ಎಂದು ಇಪ್ಪತ್ತೆರಡು ಸಲ ಹೊಡೆದುಕೊಂಡಾಗ ಎಚ್ಚೆತ್ತುಕೊಂಡಳು ನರ್ಮದ. ಹನ್ನೊಂದು ಗಂಟೆ! ಇನ್ನು ಸಮಯವನ್ನು ವ್ಯರ್ಥ ಮಾಡಬಾರದು. ಅವಳು ಹೊರಡಲಣಿಯಾದಳು. ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಂಡಾಗ ಅವಳಿಗೆ ಅಚ್ಚರಿಯಾಗಿತ್ತು. ಅವಳ ನಲವತ್ತೆರಡು ವರ್ಷಗಳಿಗೆ ಬಹಳವೇ ಆಕರ್ಷಕವಾಗಿದ್ದಳು. ಅವಳ ಸಹೋದ್ಯೋಗಿಗಳು ಅವಳನ್ನು ಗ್ಲಾಮರಸ್ ಆಂಟಿ ಎಂದು ಅವಳ ಗೈರುಹಾಜರಿಯಲ್ಲಿ ಕರೆಯುತ್ತಿದ್ದ ವಿಷಯ ತಿಳಿದು ಅದು ಅವಳಿಗೆ ಒಂದು ರೀತಿಯ ಹೆಮ್ಮೆಯನ್ನೇ ತಂದಿತ್ತು.

    ನರ್ಮದಾ..! ನೀನು ಇನ್ನೂ ಇಲ್ಲೇ ಇರುವುದು ಸರಿಯಲ್ಲ. ಪೊಲೀಸರ ಬಳಿಗೆ ಹೋಗಿ ಕಂಪ್ಲೇಂಟ್ ಕೊಡು. ನಿನ್ನನ್ನು ಮುಗಿಸಬೇಕೆಂದಿರುವವರಿಗೆ ಸರಿಯಾದ ಪಾಠ ಕಲಿಸು ಎಂದು ಕೂಗಿ ಹೇಳಿತ್ತು ಅವಳ ವಿವೇಕ. ಆದರೆ ಅವಳ ಮನಸ್ಸು ಒಡಂಬಡಲಿಲ್ಲ. ಆ ಮಕ್ಕಳ ಕೈಗಳನ್ನೇಕೆ ಕೊಳೆ ಮಾಡಬೇಕು? ರಕ್ತ, ಕೊಲೆ ಇವುಗಳಿಗೆ ಅವರುಗಳನ್ನೇಕೆ ಗುರಿ ಪಡಿಸಬೇಕು? ನಾನಿಲ್ಲಿಂದ ಹೊರಟುಹೋದರೆ ಸಾಕು, ಅವರುಗಳೂ ಸಂತೋಷವಾಗಿರುತ್ತಾರೆ, ನಾನೂ ಉಳಿದುಕೊಳ್ಳುತ್ತೇನೆ.

    ಅವಳು ಹಿಂದೇಟು ಹಾಕಿದ್ದು ಒಂದೇ ವಿಷಯದಲ್ಲಿ. ಅದೆ ಎದೆಯ ಮೇಲೆ ತೂಗಾಡುತ್ತಿದ್ದ ಲಾಕೆಟ್. ಅದು ಅವಳ ತಾಯಿಯ

    Enjoying the preview?
    Page 1 of 1