Discover millions of ebooks, audiobooks, and so much more with a free trial

Only $11.99/month after trial. Cancel anytime.

Koopa
Koopa
Koopa
Ebook390 pages2 hours

Koopa

Rating: 0 out of 5 stars

()

Read preview

About this ebook

Novelist, poet, short-story writer, essayist, playwright, educationist, linguist.... author of over 90 books in Kannada as well as English.

M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teachingof English language, grammar and Phonetics; Published in Kannada 45 novels, 3 anthologies of short stories, 4 anthologies of essays, 2 anthologies of poems, 18 plays, and a travelogue; Published in the Tulu language a novel and a collection of poems translated from English.
LanguageKannada
Release dateAug 12, 2019
ISBN6580200202610
Koopa

Read more from K.T. Gatti

Related to Koopa

Related ebooks

Reviews for Koopa

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Koopa - K.T. Gatti

    http://www.pustaka.co.in

    ಕೂಪ

    Koopa

    Author:

    ಕೆ. ಟಿ. ಗಟ್ಟಿ

    K.T. Gatti

    For more books

    http://www.pustaka.co.in/home/author/kt-gatti-novels

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಕೂಪ

    (ಕಾದಂಬರಿ)

    ಕೆ.ಟಿ. ಗಟ್ಟಿ

    ‘ಕೂಪ’ದ ಬಗ್ಗೆ....

    ನನ್ನ ಕಾದಂಬರಿ ‘ಅಮುಕ್ತ’ದ ಮುನ್ನುಡಿಯಲ್ಲಿ ‘ಕೂಪ’ ಕಾದಂಬರಿಯ ಕುರಿತು ಒಂದು ಮಾತು ಹೇಳಿದದೆ. ‘ಅಮುಕ್ತದ’ದ ಉತ್ತಮ ಮತ್ತು ‘ಕೂಪ’ದ ಆನಂದ ಒಂದೇ ವ್ಯಕ್ತಿಯ ಎರಡು ವ್ಯಕ್ತಿತ್ವಗಳು ಎಂದು.

    ಆ ಮೂಲ ಕೂಪದಿಂದ ಕೂಪಕ್ಕೆ ಹಾರಿ, ಕೊನೆಗೂ ಒಂದು ಕೂಪ ವಾಸಿಯಾಗುತ್ತಾನೆ. ಆನಂದ ಇದ್ದ ಕೂಪದಲ್ಲೇ ಉಳಿಯುತ್ತಾನೆ. ಗ್ರಾಮ ಕೂಪಕ್ಕಿಂತ ನಗರಕೂಪ ಮೇಲು ಎಂದುಕೊಳ್ಳುತ್ತಾನೆ. ಜೀವನದ ಗೊಂದಲದಲ್ಲಿ ಇಬ್ಬರ ಸತ್ವಹೀನತೆಯನ್ನೂ ಸ್ಫುಟವಾಗಿ ತೋರಿಸುವ ಒರೆಗಲ್ಲು ಒಂದೇ-ಹೆಣ್ಣು.

    ‘ಅಮುಕ್ತ’ ಮತ್ತು ಕೂಪದಲ್ಲಿ ಮನೋವೈಜ್ಞಾನಿಕ ಸಮಸ್ಯೆಯೇನೂ ಇಲ್ಲ. ಉತ್ತಮ ಮತ್ತು ಆನಂದ ಮನೋರೋಗಿಗಳೇನೂ ಅಲ್ಲ; ಸಾಮಾನ್ಯ ಮನುಷ್ಯರೆಂದೇ ಹೇಳಬಹುದು.

    ಒಬ್ಬ ವ್ಯಕ್ತಿಯನ್ನು ಬಾಲ್ಯದಿಂದ ವೃದ್ಧಾಪ್ಯದವರೆಗೆ ಅಥವಾ ಒಂದು ನಿರ್ದಿಷ್ಟ ಕಾಲಘಟ್ಟದಿಂದ ಇನ್ನೊಂದು ನಿರ್ದಿಷ್ಟ ಕಾಲಘಟ್ಟದವರೆಗೆ ಸಮಗ್ರವಾಗಿ ಕಾಣುವ ಅವಕಾಶ ಕತೆಯಲ್ಲಿ ಸಿಗುವಂತೆ ವಾಸ್ತವಿಕ ಜೀವನದಲ್ಲಿ ಸಿಗುವುದು ಅಪೂರ್ವ. ವ್ಯಕ್ತಿಗಳು ನಮಗೆ ಕಾಣಸಿಗುವುದು ಅವರ ಜೀವನದ ಕೆಲವೊಂದು ಸನ್ನಿವೇಶಗಳಲ್ಲಿ ಮಾತ್ರ. ಮ್ಯಕ್ತಿಗಳು ತಮ್ಮ ಜೀವನದ ಬೇರೆ ಬೇರೆ ಕಾಲಘಟ್ಟಗಳಲ್ಲಿ, ಬೇರೆ ಬೇರೆ ಪರಿಸರ. ಸನ್ನಿವೇಶಗಳಲ್ಲಿ ಹೇಗೆ ಹೇಗೆ ಇರುತ್ತಾರೆ. ಏನೇನು ಮಾಡುತ್ತಾರೆ ಎಂಬ ಮಾಹಿತಿ ನಮಗೆ ಸಿಗುವುದು ಕಡಿಮೆ.

    ಕೆಲವೊಂದು ವ್ಯಕ್ತಿಗಳ ಜೀವನವನ್ನು ಸಮಗ್ರವಾಗಿ ಕಾಣುವ, ಅಭ್ಯಸಿಸುವ ಅವಕಾಶ ನಮಗೆ ಸಿಕ್ಕರೆ ಅವರ ಚರ್ಯೆ, ಗುಣನಡತೆಗಳ ವೈಚಿತ್ರ್ಯದ ಬಗ್ಗೆ ನಮ್ಮಲ್ಲಿ ಅಚ್ಚರಿಮೂಡಬಹುದು. ಒಂದು ಸನ್ನಿವೇಶದಲ್ಲಿ ಬುದ್ಧಿವಂತನಾಗಿರುವವನು ಮತ್ತೊಂದು ಸನ್ನಿವೇಶದಲ್ಲಿ ಮೂರ್ಖನಾಗಿ, ಒಂದು ಸನ್ನಿವೇಶದಲ್ಲಿ ಸನ್ಮಾರ್ಗಿಯಾಗಿರುವವನು ಮತ್ತೊಂದು ಸನ್ನಿ ವೇಶದಲ್ಲಿ ದುರ್ಮಾರ್ಗಿಯಾಗಿ ಕಾಣಿಸಿಕೊಳ್ಳುವಂಥ ಉದಾಹರಣೆಗಳನ್ನು ಎಷ್ಟೋ ಕೊಡಬಹುದು. ‘ಅಂಥವನು ಹಾಗೆ ಮಾಡಿದನೆ?’ ‘ಎಂಥವನು ಹೇಗಾದ?’ ಎಂದು ನಾವು ತಾತ್ಕಾಲಿಕವಾಗಿ ಆಶ್ಚರ್ಯಪಟ್ಟುಕೊಳ್ಳಬಹುದು. ಇದು ವ್ಯಕ್ತಿಯಲ್ಲಾದ ಮಾನಸಿಕ ಪರಿವರ್ತನೆಯೆಂದೇ ತಿಳಿಯುತ್ತೇವೆ. ಕೆಲವು ಪರಿವರ್ತನೆಗಳನ್ನು ಬೆಳವಣಿಗೆಯೆಂದುಕೊಂಡರೆ, ಕೆಲವು ಪರಿವರ್ತನೆಗಳನ್ನು ವ್ಯಕ್ತಿತ್ವದ ಕ್ಷಯಿಸುವಿಕೆಯೆಂದೂ ತಿಳಿಯುತ್ತೇವೆ. ಒಟ್ಟಿನಲ್ಲಿ, ನಮ್ಮ ಗಮನಕ್ಕೆ ಬಂದ ಚರ್ಯೆಗಳಿಂದ ಒಬ್ಬ ವ್ಯಕ್ತಿ ‘ಇಂಥವನು’ ಎಂದು ತೀರ್ಪು ನೀಡುತ್ತೇವೆ. ಆದರೆ symptoms ಹೇಗೆ ರೋಗವಲ್ಲವೊ, ಹಾಗೆಯೇ ಚರ್ಯೆಯೆಂದರೆ ವ್ಯಕ್ತಿಯಲ್ಲ. ಒಬ್ಬ ವ್ಯಕ್ತಿಯ ಸಾಮಾಜಿಕ, ಮನೋವೈಜ್ಞಾನಿಕ ಇತ್ಯಾದಿ ಎಲ್ಲಾ ನೆಲೆಗಳನ್ನು ಅಭ್ಯಸಿಸಿದ ಮೇಲೂ ಯಾವ ಸಂಶೋಧನೆಗೂ ಸಿಗದುದು ಏನೋ ಒಂದು ಅವನಲ್ಲಿ ಇರುತ್ತದೆ. ಇದನ್ನು soul, spirit, psyche ಎಂದೆಲ್ಲಾ ಕರೆಯಬಹುದು. ಆದರೆ ಇದು ನಾಮಕರಣ ಮಾತ್ರವಾಯಿತೇ ಹೊರತು ಅದು ಏನು ಎಂದು ಹೇಳಿದಂಥಾಗಲಿಲ್ಲ.

    ಆತ್ಮ ಅಥವಾ spirit ಅಥವಾ psyche ರೋಗಗ್ರಸ್ತವಾಗಿದೆ ಎಂಬೊಂದು ಮಾತು ಇಲ್ಲ. ಬಹುಶಃ ಅದು ರೋಗಗ್ರಸ್ತವಾಗುವಂಥದ್ದಲ್ಲ. ರೋಗಕ್ಕೆ ಅತೀತವಾದುದು. ಆದರೆ ಅದರಲ್ಲಿ ಊನವಿರಲು ಸಾಧ್ಯ ಊನವು ರೋಗವಲ್ಲ. ವ್ಯಕ್ತಿಯಲ್ಲಿ ಯಾವುದನ್ನು ಆತ್ಮವೆಂದು ಕರೆಯುತ್ತೇವೊ ಅದು ಪರಿಪೂರ್ಣವಾದ ಒಂದು something ಅಲ್ಲ. ಅದು ಪರಿಪೂರ್ಣವಾದುದಾದರೆ ಪರಮಾತ್ಮನಿಗೆ ಸಮ ಎಂಬ ನಂಬಿಕೆ ಇದೆ. ಅದು ಪರಿಪೂರ್ಣಗೊಳ್ಳುವವರೆಗೆ ಮರಳಿ ಮರಳಿ ಹುಟ್ಟುತ್ತದೆ ಎಂಬ ತತ್ವ ಶಾಸ್ತ್ರೀಯವಾದವೂ ಇದೆ. ಅಂದರೆ ಅದು ಪರಿಪೂರ್ಣವಾಯಿತೆಂದಾಗ ಮರಳಿಹುಟ್ಟುವ ಅವಶ್ಯಕತೆಯಿಲ್ಲದೆ ‘ಇಲ್ಲ’ ಅಥವಾ ‘ಕಾಣದುದು’ ಆಗುತ್ತದೆ, ಪರಮಾತ್ಮವಾಗುತ್ತದೆ ಎಂದರ್ಥ. ಆದುದರಿಂದಲೇ ಪರಮಾತ್ಮ ಮಾಡಿದುದೆಲ್ಲಾ ಸರಿಯೆನಿಸಿಕೊಳ್ಳುತ್ತದೆ. ಇಂಥವನು ಹೀಗೆ ಮಾಡುವುದು ಸರಿಯಲ್ಲ (ಹಿಂದುವು ಗೋಮಾಂಸ ತಿನ್ನಬಾರದು, ಮುಸ್ಲಿಮನು ಹಂದಿ ತಿನ್ನಬಾರದು ಎಂದಂತೆ) ಎಂದು ಎಂಥವನೆಂದು ತಿಳಿದರೆ ಮಾತ್ರ ಹೇಳಲು ಸಾಧ್ಯ. ಎಂಥವನೆಂದು ತಿಳಿದಿರದಿದ್ದರೆ ಅವನು ಹೀಗೆ ಮಾಡಿದರೆ ಸರಿ, ಹೀಗೆ ಮಾಡಿದರೆ ತಪ್ಪು ಎಂದು ಹೇಗೆ ಹೇಳಲು ಸಾಧ್ಯ? ಪರಮಾತ್ಮ ಅಂಥವನು. ಪರಮಾತ್ಮನಂತೆಯೇ ಪರಿಪೂರ್ಣನಾದ ಅಂದರೆ ಪರಮಾತ್ಮನಿಗೆ ಸಮನಾದ ಒಂದು ಆತ್ಮ ನಮಗೆ ಕಾಣಸಿಗುವುದಿಲ್ಲ. ಆ ಕಾರಣದಿಂದಲೇ ಅದು ನಮಗೆ ಕಾಣಸಿಗುವಂಥಾದ್ದು ಅಲ್ಲವೆನಿಸಿಕೊಳ್ಳುತ್ತದೆ. ನಾವೆಲ್ಲಾ ಕೊರತೆಯಿರುವ ಆತ್ಮಗಳೆಂದಾದರೆ, ಪರಿಪೂರ್ಣತೆಯ ಸ್ಥಿತಿಯು ಏನು ಎಂಬುದು ತಿಳಿಯದಿರುವುದರಿಂದ ಕೊರತೆಯು ಕೂಡಾ ಏನು, ಯಾವ ಬಗೆಯದು ಎಂದು ಹೇಗೆ ಹೇಳಲು ಸಾಧ್ಯ? ಪರಿಪೂರ್ಣವಾದುದು ‘ಹೀಗೆ ಹೀಗೆ’ ಎಂಬ ಒಂದು vague concept ನಮ್ಮಲ್ಲಿದೆ, ಅದರ ಆಧಾರದಿಂದ ಕೊರತೆ ಅಂದರೆ ‘ಹೀಗೆ ಹೀಗೆ’ ಎಂಬುದೂ ಒಂದು vague concept ಅಲ್ಲದೆ ಬೇರೆಯಲ್ಲ. ಈ ಬಗೆಯ ಸೀಮಿತಜ್ಞಾನದ ಪ್ರಕಾರ ಹೇಳುವುದಾದರೆ psyche ಎಂಬುದು ಪರಿಪೂರ್ಣತೆಗೆ ಹತ್ತಿರವಿದ್ದಷ್ಟೂ integrated ಆಗಿರುತ್ತದೆ. ಕೊರತೆಯು ಹೆಚ್ಚಿದಷ್ಟೂ  disintegrated ಆಗಿರುತ್ತವೆ ಎನ್ನಬಹುದು. ಪೂರ್ಣ integrated ಆದವನು ಸಂತನಗಾಗುತ್ತಾನೆ, ಪೂರ್ಣ disintegrated ಆದವನು ಹುಚ್ಚನಾಗುತ್ತಾನೆ ಎನ್ನಬಹುದೇನೊ. ಎಲ್ಲಾ ಬಗೆಯ ದುರ್ವೃತ್ತಿಗಳು ಹುಚ್ಚಿಗೆ ಹತ್ತಿರ. ಎಲ್ಲಾ ಬಗೆಯಸದ್ವೃತ್ತಿಗಳು ಸಂತತನಕ್ಕೆ ಹತ್ತಿರ ಎನ್ನಬಹುದೇನೋ. ಆತ್ಮದ ಊರ್ಜಿತಕ್ಕಾಗಿ ‘X’ ಎತ್ತಿರಬಹುದಾದ ಮತ್ತು ಎತ್ತಬೇಕಾದ ಹಲವು ಜನ್ಮಗಳಲ್ಲಿ ಈಗಿನ ಅವನ ಜನ್ಮವು ಒಂದು ಎಂದಿಟ್ಟುಕೊಂಡರೆ, ಅವನ ಆತ್ಮವನ್ನು ಊರ್ಜಿತಗೊಳಿಸುವ ಅಥವಾ ಜೀರ್ಣಗೊಳಿಸುವ ಅಂಶವು ಅವನ ಭೌತಿಕಪರಿಸರವೆಂದಿಟ್ಟುಕೊಂಡರೆ ಸಂತತನಕ್ಕೆ ಹತ್ತಿರವೆನಿಸುವಂಥ ಆತ್ಮದೊಂದಿಗೆ ಜನ್ಮಕ್ಕೆ ಬಂದ ‘X’ ಹುಚ್ಚುತನಕ್ಕೆ ಹತ್ತಿರವಿದ್ದಾನೆ ಎನ್ನಬಹುದು. ಕಾರಣ ಪರಿಸರದ ಪ್ರಭಾವಕ್ಕೆ ಬಹಳ ಸುಲಭದಲ್ಲಿ ಬಲಿ ಬೀಳುವಂಥ ಒಂದು ಕೊರತೆಯ ಸಹಿತ ಅವನು ಜನ್ಮಕ್ಕೆ ಬಂದಿದ್ದಾನೆ.

    ಜನ್ಮಪುನರ್ಜನ್ಮಗಳ ವಿಚಾರ ಬರೀ philosophical illusion ಎಂದಿಟ್ಟುಕೊಳ್ಳೋಣ. ಆದರೆ ಆ ಬಗೆಗೆ ನಡೆದ ತರ್ಕ, ವಿಚಾರಣೆಗಳು ಒಬ್ಬ ವ್ಯಕ್ತಿಯ psyche ಯ ಸ್ವರೂಪವನ್ನು ಅರಿಯಲು ಸಹಕಾರಿಯಾಗುತ್ತವೆ ಎನ್ನಬಹುದು. ಕಣ್ಣಿಗೆ ಕಾಣಿಸದ, ಸಂಶೋಧನೆಗೆ ಸಿಗದ ಅವನ psychic ಅನುಕೂಲವಾಗುತ್ತದೆಯೆನ್ನಬಹುದು. ಸಂಸ್ಕಾರ, ಮನಸ್ಸು ಮತ್ತು ಅನುಭವಗಳೇ ಎಲ್ಲವೂ ಅಲ್ಲ ಎಂಬುದನ್ನು ಅರಿತುಕೊಂಡಾಗ, ಅವೆಲ್ಲಕ್ಕಿಂತ ಹೊರತಾದುದರ ಕುರಿತು ಏನಾದರೂ ಸ್ವಲ್ಪ ಯೋಚಿಸಲು, ಅರಿತುಕೊಳ್ಳಲು ಈ ತರ್ಕ, ವಿಚಾರಣೆಗಳು ದಾರಿಮಾಡಿಕೊಡುತ್ತವೆ.

    ಒಬ್ಬ ವ್ಯಕ್ತಿ ಏಕಕಾಲದಲ್ಲೇ ಸತ್ಯಸಂಧನೂ ಸುಳ್ಳು ಹೇಳುವವನೂ, ಬುದ್ಧಿವಂತನೂ, ಮೂರ್ಖನೂ, ನೀತಿವಂತನೂ, ದುರಾಚಾರಿಯೂ ಆಗಿ ಕಾಣಿಸಿದರೆ ಅದನ್ನು ಮಾನಸಿಕ ರೋಗವೆನ್ನುತ್ತೇವೆ, Schizophrenia ಎನ್ನುತ್ತೇವೆ.

    ಪರಿಸರದ ಪ್ರಭಾವದಿಂದ ಮಾನಸಿಕ ಪರಿವರ್ತನೆ ಅಥವಾ ಮಾನಸಿಕ ರೋಗಉಂಟಾಗುತ್ತದೆ ಎಂಬ ವಾದ ಇದೆ. ಪ್ರೇಮದಲ್ಲಿ ಹೆಣ್ಣಿನಿಂದ ವಂಚಿಸಲ್ಪಟ್ಟವನು ಸ್ತ್ರೀ ದ್ವೇಷಿಯಾಗುವುದು, ಸಿರಿವಂತನೊಬ್ಬನಿಂದ ಅನ್ಯಾಯಕ್ಕೊಳ್ಳಗಾದವನು ಸಿರಿವಂತರನ್ನೆಲ್ಲ ದ್ವೇಷಿಸುವುದು ಇತ್ಯಾದಿ ಎಷ್ಟೇ ಉದಾಹರಣೆಗಳನ್ನು ಕೊಡಬಹುದು. ದುರ್ಮಾರ್ಗಿಗಳೊಡನೆ ಸೇರಿ ಒಬ್ಬ ದುರ್ಮಾರ್ಗಿಯಾಗುವುದು.ಸನ್ಮಾರ್ಗಿಗಳೊಡನೆ ಸೇರಿ ಒಬ್ಬ ಸನ್ಮಾರ್ಗಿಯಾಗುವುದು ಒಂದು ಮಾನಸಿಕ ಪರಿವರ್ತನೆ. ಸಿದ್ಧಾರ್ಥನು ಬುದ್ಧನಾದುದು, ವ್ಯಾಧ ವಾಲ್ಮೀಕಿಯಾದುದು, ಹಿಟ್ಲರ್ ಯೆಹೂದಿಯರ ಯಮನಾದುದು ಎಲ್ಲಾ ಈ ಬಗೆಯ ಪರಿವರ್ತನೆಗಳೇ. ಪರಿಸರದ ಪ್ರಭಾವಕ್ಕೆ ವಿರುದ್ಧವಾದ ದಂಗೆ ಮತ್ತು ವಿರೋಧ ಧೋರಣೆಯ ಉತ್ಕ್ರಮಣವೂ ಒಂದು ಬಗೆಯ ಪರಿವರ್ತನೆಯೇ.

    ಆದರೆ ಯಾವ ಕಾರಣವೂ ಇಲ್ಲದೆ ಒಬ್ಬ ವಿನಾಕಾರಣ ಕೊಲೆಮಾಡಿದ. ಒಬ್ಬ ವಿನಾ ಕಾರಣ ಸನ್ಯಾಸಿಯಾದ. ಒಬ್ಬ ವಿನಾ ಕಾರಣ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ. ಒಬ್ಬ ವಿನಾ ಕಾರಣ ಮಾತುಮಾತಿಗೂ ಸುಳ್ಳಾಡಿದ ಎಂದರೆ? ಅವನ ಈ ಮಾನಸಿಕ ರೋಗಕ್ಕೆ ಅವನ ಮೇಲಾದ ಯಾವುದೋ ಒಂದು ಪ್ರಭಾವ ಕಾರಣವೆನ್ನಬಹುದು. ಆದು ಅವನಿಗೇ ತಿಳಿಯದಿರಬಹುದು. ಅವನ ಪರಿಸರದಲ್ಲಿರುವವರಿಗೂ ತಿಳಿಯದಿರಬಹುದು. ಅಥವಾ ಅಂಥ ಪ್ರಭಾವವೇನೂ ಆಗಿಲ್ಲದಿರಲೂಬಹುದು. ಅದು ಅವನ ವ್ಯಕ್ತಿತ್ವದ ಮೂಲಭೂತ ಘಟಕದಲ್ಲಿ ಅಂತರ್ಗತವಾಗಿದ್ದ ಏನೋ ಒಂದು ಕೊರತೆಯಿಂದಲೂ ಆಗಿರಬಹುದು. ಆಗ ಅವನ ಪೂರ್ವಜರು ಎಂಥವರಾಗಿದ್ದರು ಎಂಬ ವಿಚಾರಣೆಗೆ ತೊಡಗುತ್ತೇವೆ. ಇಂಥ tendency ಗಳು ಅವನ ತಂದೆ ತಾಯಿಯಲ್ಲೋ, ತಾತ ಮುತ್ತಾತನಲ್ಲೋ ಇತ್ತೆಂದು ಕಂಡುಕೊಳ್ಳುತ್ತೇವೆ.

    ಅನುವಂಶಿಕ ಗುಣ, ಪರಿಸರದ ಪ್ರಭಾವ ಮಿದುಳಿನ ಹಾಗೂ ಹಾರ್ಮೋನುಗಳ ವೈಶಿಷ್ಟ್ಯ ಇತ್ಯಾದಿಗಳನ್ನು ಕಾಣಬಹುದು. ಕಂಡುಕೊಳ್ಳಬಹುದು. ಉದಾಹರಿಸಬಹುದು. ಆದರೆ ಈಯೆಲ್ಲಾ ಸಂಥೋಧನೆಗೆ ಸಿಗದುದು ಕಾಣಲಾಗದ್ದು, ವಿಶ್ಲೇಷಣೆಗೆ ಸಿಗದುದು, ಮನೋವೈಜ್ಞಾನಿಕ ಸಿದ್ಧಾಂತಗಳಿಂದಲೂ ಅಗೆದು ತೆಗೆಯಲಾಗದುದು ಒಳಗೆ ಏನೋ ಇದೆ ಎಂದು ಅನಿಸುತ್ತದೆ. ಅನುವಂಶಿಕ ಗುಣ, ಪರಿಸರದ ಪ್ರಭಾವ, ಮಿದುಳಿನ ಅಥವಾ ಹಾರ್ಮೋನುಗಳ ವೈಶಿಷ್ಟಯ ಇತ್ಯಾದಿಗಳಿಂದಲ್ಲದೆ ಮನುಷ್ಯ ಯಾವುದೋ ಒಂದು ರೀತಿಯಲ್ಲಿ ವರ್ತಿಸುತ್ತಾನೆ. ಒಂದೇ ಪೂರ್ವಜರಿರುವ, ಒಂದೇ ಪರಿಸರದಲ್ಲಿರುವ, ಮಿದುಳು ಮತ್ತು ಹಾರ್ಮೋನುಗಳು ಆರೋಗ್ಯ ಸ್ಥಿತಿಯಲ್ಲಿರುವ ಅಣ್ಣ ತಮ್ಮಂದಿರು ಅವಳಿಜವಳಿಗಳು ಕೂಡಾ ಬೇರೆ ಬೇರೆ ವ್ಯಕ್ತಿತ್ವಗಳುಳ್ಳವರಾಗುತ್ತಾರೆ. ಎಲ್ಲಾ ಗುಣಗಳನ್ನೂ ಎಲ್ಲಾ ಪ್ರಭಾವಗಳನ್ನೂ ತನ್ನದೇ ಆದ ರೀತಿಯಲ್ಲಿ ಹೀರಿಕೊಂಡು ಬೆಳೆಯುವ ಮತ್ತು ಅಭಿವ್ಯಕ್ತಗೊಳ್ಳುವ ಒಂದು something ವ್ಯಕ್ತಿಯೊಳಗಿದೆ. ಇದು ಮಿದುಳಲ್ಲ, ಹಾರ್ಮೋನುಗಳಲ್ಲ, ಜ್ಞಾನೇಂದ್ರಿಯಗಳಲ್ಲ. ಇದೇ ಬಹುಶಃ psyche ಎಂದು ಕರೆಯಲ್ಪಡುವಂಥದು. ವ್ಯಕ್ತಿಯ ಈ psychic centre ನಲ್ಲಿ ಏನು ನಡೆದು ವ್ಯಕ್ತಿ ಏನಾಗುತ್ತಾನೆ, ಏನು ಮಾಡುತ್ತಾನೆ ಎಂಬ ಕುತೂಹಲ ಉತ್ತಮ ಮತ್ತು ಆನಂದ ಎಂಬ ಎರಡು ಪಾತ್ರಗಳನ್ನು ‘X’ ನಿಂದ ಸೃಷ್ಟಿಸಲು ಕಾರಣವಾಯಿತು.

    ಈ ‘psyche’ ಎಂದರೆ ಏನು ಎಂದು ಹೇಳಲಾಗದು. ‘ಆತ್ಮ’ ಎಂದರೂ ಉತ್ತರವಾಗದು . ‘ಆತ್ಮ ಎಂದರೆ ಏನು ಪ್ರಶ್ನೆ ಹುಟ್ಟುತ್ತದೆ. ‘ಇವನ ಮನಸ್ಸು ಹೀಗಿದೆ’ ಎಂದು ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿ ಹೇಳಬಹುದೇ ಹೊರತು ‘ಇವನ ಆತ್ಮ ಹೀಗಿದೆ’ ಎಂದು ಹೇಳಲಾಗದು, ಆದರೆ ಒಬ್ಬ ವ್ಯಕ್ತಿಯ ವರ್ತನೆಯಿಂದ, ಅದುವರೆಗೆ ಪ್ರಮಾಣಿತವಾದ ಅವನ ವ್ಯಕ್ತಿತ್ವದಿಂದ ಅವನು ಎಷ್ಟು ಭಿನ್ನವಾಗಿ ವರ್ತಿಸುತ್ತಿದ್ದಾನೆ ಎಂಬುದರಿಂದ ಅವನಲ್ಲಿ ಏನೋ ಪರಿವರ್ತನೆ ಉಂಟಾಗಿದೆ ಎಂಬುದನ್ನು ಕಂಡುಕೊ‍ಳ್ಳಬಹುದು. ಅಲ್ಪ ಸ್ವಲ್ಪ ಕಾರಣಗಳು ದೊರೆತಾಗ, ನಾರ್ಮಲ್ ಮನಸ್ಸಿಗಿಂತ ಅವನ ಮನಸ್ಸು ಎಷ್ಟು ವ್ಯತ್ಯಾಸವಾಗಿದೆ ಎಂಬುದು ವಿಶದವಾದಾಗ ‘psychic disturbance’ ನಿಂದ ತೊಂದರೆ ಪಡುತ್ತಿರಬಹದುದು. ನಾನು ಕಂಡಂತೆ ಉತ್ತಮ ಮತ್ತು ಆನಂದರನ್ನು ಸೃಷ್ಟಿಸಲು ನನಗೆ ಪ್ರೇರಕನಾದ ‘X’ ಅಂತವನೊಬ್ಬ.

    1978ರಲ್ಲಿ ‘ಅಮುಕ್ತ’ಕ್ಕೆ ಮುನ್ನುಡಿಯನ್ನು ಬರೆಯುವಾಗ ‘X’ ಭವಿಷ್ಯದಲ್ಲಿ ಏನಾಗಬಹುದೆಮದು ಊಹಿಸುತ್ತಾ ಒಂದೋ ಅವನು ಒಂದು ದಿನ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಅಥವಾ ಆನಂದನಂತಾಗುತ್ತಾನೆ ಎಂದು ಬರೆದಿದ್ದೆ. ‘X’ ನ್ನು ನಾನು ಕಂಡುದು ಮುಂಬಾಪುರದಲ್ಲಿ ಎಂದು ಹೇಳಿದ್ದೆ. ‘ಅಮುಕ್ತ’ ಕಾದಂಬರಿಯಲ್ಲಿ ಚಿತ್ರಿತವಾದ ಉತ್ತಮನ ಭವಿಷ್ಯವು ಕತೆಯ ಅನುಕೂಲಕ್ಕೆ ಮಾಡಿಕೊಂಡ ಊಹೆ. ವಾಸ್ತವಿಕವಾಗಿ, ‘X’ ಗೆ ಮುಂದಾಪುರವನ್ನು ಬಿಟ್ಟು ತನ್ನ ಗ್ರಾಮಕ್ಕೆ ಹೋಗಲು ಅವಕಾಶ ಸಿಕ್ಕಿದ್ದರಿಂದಲೇ ಆತ್ಮಹತ್ಯೆಯ ಸಂಭವನೀಯತೆ ಇಲ್ಲವಾಯಿತು. ‘X’ ವಿವಾಹಿತನಾದ.

    ‘ಕೂಪ’ದ ಪ್ರಕಾಶನದಲ್ಲಿ ಇಷ್ಟೊಂದು ವಿಳಂಬವಾದುದರಿಂದ ಹಿಂದೆ ಉತ್ತಮನಾಗಿದ್ದ ‘X’ ಈಗ ಆನಂದವಾಗಿದ್ದಾನೆ ಎಂದು ಹೇಳಲು ಅವಕಾಶವಾಯಿತು. ಇದಕ್ಕೆ ಅನುಕೂಲ ಮಾಡಿಕೊಟ್ಟವರಿಗೆ ಕೃತಜ್ಞ.

    ಕೆ.ಟಿ. ಗಟ್ಟಿ.

    _______________

    ಮೇ 15

    ಬಸ್ಸಿನಿಂದ ಇಳಿದು ಅತ್ತಿತ್ತ ನೋಡಿದಾಗ ಆನಂದನಿಗೆ ಸ್ವಲ್ಪಮಟ್ಟಿಗೆ ದಿಗ್ಭ್ರಮೆಯೇ ಉಂಟಾಯಿತು. ಇದು ಅಂಬಾವರವಲ್ಲ. ತಾನೆಲ್ಲೋ ತಪ್ಪು ಜಾಗದಲ್ಲಿ ಇಳಿದುಬಿಟ್ಟೆ ಎಂದನಿಸಿ ಹಿಂದೆ ಮುಂದೆ ದೃಷ್ಟಿ ಹಾಯಿಸಿದ್ದ.

    ಹೌದು, ಅದು ಅಂಬಾವರವೇ. ಆದರೆ ಹನ್ನೆರಡು ವರ್ಷಗಳ ಹಿಂದೆ ಬಸ್ಸು ಬಂದು ನಿಲ್ಲುತ್ತಿದ್ದ ಸ್ಥಳ ಅಲ್ಲ ಅದು. ಈಗ ಅವನು ಹೊಸದೊಂದು ರಸ್ತೆಯ ಮೇಲೆ ನಿಂತಿದ್ದ. ಹನ್ನೆರಡು ವರ್ಷಗಳ ಹಿಂದೆ ಅಲ್ಲಿ ಆ ರಸ್ತೆ ಇರಲಿಲ್ಲ. ಅವನಿಗೆ ತಿಳಿದಿದ್ದ ಹಳೆಯ ರಸ್ತೆ ಎಲ್ಲೋ ಐವತ್ತು ಗಜ ಪಡುಗಡೆಗೆ ಅಥವಾ ಮೂಡುಗಡೆಗೆ ಇರಬೇಕು ಅನಿಸಿತವನಿಗೆ. ಈ ಹೊಸ ರಸ್ತೆ ಅಂಬಾವರದ ಸಣ್ಣ ಪೇಟೆಯನ್ನು ಸೀಳಿ ಪಕ್ಕದಲ್ಲಿದ್ದ ಬಯಲಿನ ಮೇಲೆ ರಾಜಾರೋಷವಾಗಿ ಏರಿಹೋಗಿತ್ತು. ಪೇಟೆಯ ಕಡೆಯಿಂದ ಮೆಲ್ಲಮೆಲ್ಲನ ಏರುತ್ತಾ ಬಯಲಿನ ಭಾಗದಲ್ಲಿ ಬಹಳವಾಗಿ ಉಬ್ಬಿಕೊಂಡು, ಬಯಲಿನ ಆ ಕಡೆಗೆ ಇಳಿದು, ಒಂದು ಸಣ್ಣ ತಿರುವಿನಾಚೆ ಅದೃಶ್ಯವಾಗಿ ಹೋಗಿತ್ತು. ಆ ರಸ್ತೆ ನ್ಯಾಶನಲ್ ಹೈವೇ ಎಂದು ತಿಳಿಯಲು ಆನಂದನಿಗೆ ಬಹಳ ಹೊತ್ತು ಬೇಕಾಗಲಿಲ್ಲ. ಆದರೆ ಅದು ಅಂಬಾವರದ ಸ್ವರೂಪವನ್ನೇ ಬದಲಿಸಿಬಿಟ್ಟಿತ್ತು. ಅಂಬಾವರಕ್ಕೆ ಅದೊಂದು ಹೊಸತನವನ್ನು ತಂದಂತೆ ತೋರಿದರೂ, ಅವನಿಗೆ ತಿಳಿದಿದ್ದ ಅಂಬಾವರವನ್ನು ಇಬ್ಭಾಗವಾಗಿ ಸೀಳಿ, ಅದರ ಒಡಲನ್ನು ತೆರೆದಿಟ್ಟಿತ್ತು. ಅಂಬಾವರದ ಸಮಷ್ಟಿ ಸ್ವರೂಪವನ್ನು ಛಿದ್ರಗೊಳಿಸಿ ಅದರ ಆತ್ಮವನ್ನು ಕಿತ್ತೆಸೆದು, ಅದರ ನೈಸರ್ಗಿಕ ‘ಆಯಾಮವನ್ನು ಕರಗಿಸಿ ಬಿಟ್ಟಂತೆ’ ತೋರಿತು.

    ಆ ರಸ್ತೆಯಿಂದ ತನ್ನ ಮನೆಗೆ ಹೋಗಬೇಕಿದ್ದರೆ ಯಾವ ಕಡೆಯಿಂದ, ಯಾವ ದಾರಿಯಲ್ಲಿ ಹೋಗಬೇಕೋ ಎಂದು ಆನಂದನೊಮ್ಮೆ ಚಿಂತಿಸಿದ. ತನ್ನ ಮನೆಯಿರುವುದು ಅಲ್ಲಿಂದ ಪಡುಗಡೆಗೊ ಮೂಡುಗಡೆಗೊ ಎಂಬುದು ಅವನಿಗೆ ಸ್ಪಷ್ಟವಾಗಲಿಲ್ಲ. ಹಳೆಯ ಮಾರ್ಗವನ್ನು ಕಂಡರೆ ಥಟ್ಟನೆ ಹೇಳಿಬಿಡಬಹುದಾಗಿತ್ತು. ಆದರೆ ಹಳೆಯ ಮಾರ್ಗವೆಲ್ಲೋ ಅದೃಶ್ಯವಾಗಿತ್ತು.

    ರಸ್ತೆಯ ಆ ಕಡೆ ಈ ಕಡೆ ಇದ್ದ ಅಂಗಡಿಗಳಿಂದ, ಹೋಟೆಲುಗಳಿಂದ ಕೆಲವರು, ಕೈಯಲ್ಲಿ ಮಜಬೂತಾದ ಸೂಟುಕೇಸನ್ನು ಹಿಡಿದುಕೊಂಡು ಅತ್ತಿತ್ತ ನೋಡುತ್ತಿದ್ದ ತರುಣನನ್ನು ಕುತೂಹಲದಿಂದ ನೋಡಿದರು. ಮಾರ್ಗದಲ್ಲಿ ಹಾದು ಹೋಗುತ್ತಿದ್ದ ಜನರು. ಅಲ್ಲೇ ಒಂದು ಹಲಸಿನ ಮರದಡಿಯಲ್ಲಿ ಮೀನಿನ ಬುಟ್ಟಿಯಿರಿಸಿ ಮೀನು ಮಾರುತ್ತಿದ್ದ ಇಬ್ಬರು ಹೆಣ್ಣುಗಳೊಡನೆ ಮಾತಾಡುತ್ತಾ ಮೀನನ್ನು ಖರೀದಿಸುತ್ತಿದ್ದ ನಾಲ್ಕೈದು ಮಂದಿ, ಮತ್ತೊಂದೆಡೆ ಹರಟುತ್ತಾ ನಿಂತಿದ್ದ ಮತ್ತೆರಡು ಮಂದಿ ಎಲ್ಲರೂ ಆನಂದನನ್ನು ನೋಡಿದರು. ಅವರ ನೋಟದಲ್ಲಿ ಕುತೂಹಲವಿತ್ತು. ‘ಯಾರೀತ’ ಎಂಬ ಪ್ರಶ್ನೆಯಿತ್ತು. ಆದರೆ ಯಾರೊಬ್ಬರೂ ಅವನ ಗುರುತು ಹಿಡಿದಂತೆ ತೋರಲಿಲ್ಲ. ಗುರುತು ಹಿಡಿಯಲು ಪ್ರಯತ್ನಿಸುವಂತೆಯೂ ತೋರಲಿಲ್ಲ. ಅದೇ ಊರು, ಅದೇ ಜನರು. ಎಲ್ಲಾ ಹೊಸಬರಂತೆ ತೋರುತ್ತಿದ್ದರೂ ಎಲ್ಲಾ ಹಳಬರೇ. ಆದರೂ ನನ್ನ ಗುರುತು ಅವರಿಗೆ ಸಿಗುತ್ತಿಲ್ಲ ಎಂದು ಮುಗುಳ್ನಕ್ಕ ಆನಂದ.

    ಇಳಿಯುತ್ತಿರುವ ಸೂರ್ಯನ ಬಿಸಿಲಿನಲ್ಲಿ ಅಂಬಾವರ ಬಾಡಿ ಮಲಗಿರುವಂತೆ ತೋರಿತು. ಎಲ್ಲೂ ಚೇತನ ಕಾಣಿಸಲಿಲ್ಲ. ಹತ್ತಿಪ್ಪತ್ತು ಅಂಗಡಿಗಳು ಮತ್ತು ಮಾರ್ಗದ ಪಕ್ಕದಲ್ಲಿರುವ ಇತರ ಕಟ್ಟಡಗಳ ಮೇಲೆ, ಅವುಗಳ ಹಿಂದುಗಡೆಯಿದ್ದ ತೆಂಗು, ಕಂಗು, ಬಾಳೆಗಳ ಮೇಲೆ ಧೂಳಿನ ಹಳದಿ ಲೇಪ ಅಂಬಾವರದಲ್ಲಿ ಇನ್ನೂ ಮಳೆ ಬಂದಿಲ್ಲ ಎಂಬುದನ್ನು ಸೂಚಿಸಿತು. ಮೇ ತಿಂಗಳ ಧಗೆ ಸುಡುತ್ತಿತ್ತು. ಮುಂಬಯಿಯಲ್ಲಿ ಅಷ್ಟು ಮೇಲಾಗಿ ಸುರಿದ ಮಳೆ ಅಂಬಾವರದಲ್ಲಿ ಯಾಕೆ ಇನ್ನೂ ಬಂದಿಲ್ಲ ಎಂಬ ಶುಷ್ಕ ಯೋಚನೆಯೊಂದು ಅವನ ತಲೆಯೊಳಗೆ ಸುಳಿದುಹೋಯಿತು.

    ಮನೆ ಯಾವ ಕಡೆಯೇ ಇರಲಿ ಮನೆಗೆ ಹೋಗುವ ಯೋಚನೆ ಇರಲಿಲ್ಲ. ಹೋಗುವಂತೆಯೂ ಇರಲಿಲ್ಲ. ಮನೆಗೆ ಹೋಗಲೆಂದು ಅವನು ಬಂದವನೂ ಅಲ್ಲ. ವಾಸ್ತವಿಕವಾಗಿ ಅದು ಮನೆಯೇ ಅಲ್ಲ.

    ಅವನಿಗೆ ಈಗ ಹೋಗಬೇಕಾಗಿದ್ದುದು ಜಗನ್ನಾಥನ ಅಪ್ಪ ಕೃಷ್ಣ ನಾಯಕನ ಮನೆಗೆ.

    ಅದೆಲ್ಲೋ ಇಲ್ಲೆ ಇರಬೇಕಲ್ಲ ಎಂದು ಹೆಜ್ಜೆ ಹಾಕಿದ. ಆದರೂ ಎಲ್ಲಿ ಎಂಬುದು ಸ್ಪಷ್ಟವಾಗಲಿಲ್ಲ. ಯಾರೊಡನಾದರೂ ಕೇಳಲೆ ಎಂದೊಮ್ಮೆ ಚಿಂತಿಸಿದ. ತನ್ನ ಹುಟ್ಟೂರಿನಲ್ಲೇ ಮನೆಯ ಗುರುತು ಕೇಳುವುದು ಹಾಸ್ಯಾಸ್ಪದವಾಗಿ ತೋರಿ, ನಾಲ್ಕು ಮಾರು ನಡೆದು ಆಮೇಲೆ ನೋಡೋಣ ಎಂದು ರಸ್ತೆಯ ಮೇಲೆಯೇ ನಿಧಾನವಾಗಿ ಮುಂದಕ್ಕೆ, ತೆಂಕು ದಿಕ್ಕಿಗೆ, ಅಂದರೆ ಬಯಲಿನ ಕಡೆಗೆ ಹೆಜ್ಜೆ ಹಾಕಿದ.

    ಒಂದೈವತ್ತು ಗಜ ಮುಂದೆ ಹೋದಾಗ, ಈ ಹೊಸಮಾರ್ಗವು ಅಂಬಾವರದ ಯಾವ ಭಾಗದಲ್ಲಿ ಹಾದು ಹೋಗುತ್ತಿದೆ ಎಂದವನಿಗೆ ಅರ್ಥವಾಯಿತು. ಮೆಲ್ಮಲ್ಲನೆ ಅಲ್ಲಿರುವ ಮನೆಗಳು, ಕಟ್ಟಡಗಳ ಗುರುತು ಕೂಡ ಆಗತೊಡಗಿತು. ಬಹುಮಟ್ಟಿನ ಬದಲಾವಣೆಯೇನೂ ಈ ಹನ್ನೆರಡು ಮರ್ಷದಲ್ಲಿ ಅಲ್ಲಿ ಆದಂತೆ ತೋರಲಿಲ್ಲ. ಹಲವು ಮುರಿದು ಬಿದ್ದ, ಮುರಿದು ಬೀಳುತ್ತಿರುವ ಕಟ್ಟಡಗಳು ಅಂದೂ ಇದ್ದವು, ಇಂದೂ ಇವೆ. ಆ ಅರ್ಧಂಬರ್ಧ ಗೋಡೆಯ ಸಂದುಗೊಂದುಗಳಲ್ಲಿ, ಬಿರುಕುಗಳಲ್ಲಿ ಬೆಳೆದು ಬೇಸಗೆಯ ಬಿಸಿಲಿನ ಉರಿಗೆ ಸುಟ್ಟು ಕರಕಾದ ಹುಲ್ಲು ಅಂದೂ ಇರುತ್ತಿತ್ತು, ಈಗಲೂ ಇದೆ. ಎತ್ತ ನೋಡಿದರೂ ಹಿತ್ತಲುಗಳ ಹೊರಗೆ, ಒಳಗೆ ಎಲ್ಲಾ ಕಡೆ ಹಲಸಿನಕಾಯಿಗಳನ್ನು ಹೊತ್ತು ನಿಂತ ಹಲಸಿನ ಮರಗಳು. ಅದರೆಡೆಯಲ್ಲಿ ಹೂ, ಕಾಯಿಗಳಿಂದ ತುಂಬಿರುವ ಮಾವಿನ ಮರಗಳು. ಅದೇ ಬೃಹದಾಕಾರದ ಮರಗಳು. ಅಂದೂ ಇದ್ದುವು, ಇಂದೂ ಇವೆ. ಹಲಸಿನ ಕಾಯಿ ಹಣ್ಣುಗಲಾರಂಭಿಸಿತೆಂದರೆ ಅಂಬಾವರವಿಡೀ ಅದರ ವಾಸನೆಯಿಂದ ತುಂಬಿ ಹೋಗುತ್ತಿತ್ತು. ಇನ್ನೇನು ಮೇ ತಿಂಗಳು ಬಂದಿದೆ. ಈಗಾಗಲೇ ಅದರ ವಾಸನೆ ಆರಂಭವಾಗಿರಬೇಕು ಎಂದುಕೊಂಡ.

    ಅಂದವಾಗಿ ಬಯಲಿನ ನಡುವೆ ಚಾಚಿದ ಮಾರ್ಗದಲ್ಲಿ ಉದ್ದಕ್ಕೆ ಬಯಲಿನ ಆ ಕಡೆಗೆ ನಡೆದು ಹೋಗಬೇಕೆನಿಸಿತು ಆನಂದನಿಗೆ. ಆದರೆ ಅದೊಂದು ಅನಿಸಿಕೆ ಮಾತ್ರ. ಪ್ರಯಾಣದ ಬಳಲಿಕೆ ದೇಹದಲ್ಲಿತ್ತು; ಬಾಯಾರಿಕೆ ಗಂಟಲು ಕೊರೆಯುತ್ತಿತ್ತು. ಬೆವರಿ ಅಂಟಂಟಾಗಿ ಉರಿಯುತ್ತಿರುವ ಮೈ ಬೇರೆ.

    ಉಳಿದುದೆಲ್ಲಾ ಆಮೇಲೆ. ಈಗ ಮೊದಲಾಗಿ ಹೋಗಬೇಕಾದ್ದು ಜಗನ್ನಾಥನ ಅಪ್ಪ ಕೃಷ್ಣನಾಯಕನ ಮನೆಗೆ ಎಂದು ನೆನಪಿಸಿಕೊಂಡ.

    ಬಯಲಿನ ಅಂಟಿಗೆ ಬಂದು ಮುಟ್ಟಿದಾಗ ಎಲ್ಲವೂ ಸುಸ್ಪಷ್ಟವಾಯಿತು. ಅಲ್ಲೇ ಮಾರ್ಗದ ಎಡಗಡೆಗೆ ಅಂದರೆ ಮೂಡುಗಡೆಗೆ, ಬಯಲಿನ ಪಕ್ಕದಲ್ಲಿ ಕೃಷ್ಣನಾಯಕನ ಮನೆ. ಮಾರ್ಗದ ಬಲಪಕ್ಕದಲ್ಲಿ ಅಂದರೆ ಪಡುಗಡೆಗೆ ಕೃಷ್ಣ ನಾಯಕನ ತಂಗಿ ಗೌರಿಯ ಮನೆ.

    ಇಷ್ಟು ಕಣ್ಣಿಗೆ ಬಿದ್ದ ಮೇಲೆ ಇಡೀ ಬಯಲು ತೆರೆದಿರಿಸಿದ ಪುಸ್ತಕದಂತೆ ಆನಂದನಿಗೆ ವಿಶದವಾಗಿ ಕಾಣಿಸಿತು. ಯಾರ ಮನೆ ಎಲ್ಲಿ, ತೋಟವೆಲ್ಲಿ, ತೋಡೆಲ್ಲಿ, ಬಯಲಿನ ತುದಿಯೆಲ್ಲಿ, ಕೊನೆಯಲ್ಲಿ. ತನ್ನ ಮನೆ ಯಾವ ಕಡೆಗಿದೆ ಎಂಬುದೆಲ್ಲಾ ಮನಸ್ಸಿನಲ್ಲಿ ಒಮ್ಮೆಲೇ ಚಿತ್ರೀಕರಿಸಲ್ಪಟ್ಟಿತು.

    ಈ ತಿಳುವಳಿಕೆಯ ಬೆನ್ನಲ್ಲೇ ಒಂದು ಆಶ್ಚರ್ಯವುಂಟಾಯಿತು. ನೆನಪು ಅವನನ್ನು ಬೆಚ್ಚಿ ಬೀಳಿಸಿತು. ಹೆಚ್ಚು ಕಡಿಮೆ ಈಗ ಅವನು ನಿಂತಿದ್ದ ಸ್ಥಳದಲ್ಲೇ ಒಂದು ವಿಷ್ಣುಮೂರ್ತಿ ಭೂತದ ಗುಡಿಯಿತ್ತು. ಅದೆಲ್ಲಿ ಹೋಯಿತು ಎಂದು ಬೆರಗಾದ. ಅದು ಆ ಹೈವೇಯ ಅಡಿಯಲ್ಲಲಿ ತನ್ನ ಕಾಲಡಿಯಲ್ಲೇ ಇದೆ ಅನಿಸಿತು. ಹೈವೇ ಬಂದು ಭೂತ ಮತ್ತು ಭೂತ್ದ ಗುಡಿಗಳೆರಡನ್ನೂ ಸಂಹರಿಸಿಬಿಟ್ಟಿತೆ. ಅಷ್ಟು ಕಾರಣಿಕದ ಭೂತ ಇದನ್ನು ಹೇಗೆ ಸಹಿಸಿಕೊಂಡಿತು ಎಂದುಕೊಂಡ.

    ಅದೇ ಕ್ಷಣದಲ್ಲಿ ಅವನ ಕಣ್ಣಿಗೆ ಕೃಷ್ಣ ನಾಯಕನ ಮೆಗೆದುರಾಗಿ ಬಯಲಿನ ನಡುವಿನಲ್ಲಿದ್ದ ಹೊಚ್ಚ ಹೊಸದಾಗಿ ಸುಣ್ಣಬಣ್ಣ ಮಾಡಿದ ಗುಡಿಯೊಂದು ಗೋಚರಿಸಿತು. ಸರಿ ವಿಷ್ಣುಮೂರ್ತಿಯ ಗುಡಿಯನ್ನು ಹೊಸದಾಗಿ ಅಲ್ಲಿ ಕಟ್ಟಿರಬೇಕು ಎಂದುಕೊಂಡ. ಭೂತದ ಗುಡಿಯ ಮುಂದಿನ ವಿಶಾಲವಾದ ಗದ್ದೆಯ ನಡುವಿನಲ್ಲಿ ಒಂದು ಬೃಹದಾಕಾರದ ಕಟ್ಟಿಗೆಯ ರಾಶಿ ಕಾಣಿಸಿತು.

    ಮಾರ್ಗದಲ್ಲಿ ನಿಂತು ಕೃಷ್ಣನಾಯಕನ ಮನೆಯ ಕಡೆಗೆ ನೋಡಿದ. ಮನೆ ಹಿಂದಿದ್ದ ಹಾಗೆಯೇ ಇದ್ದರೂ ಅಲ್ಲೊಂದು ವಿಚಿತ್ರವಾದ ಬದಲಾವಣೆಯುಂಟಾಗಿತ್ತು. ಹೊಸದಾಗಿ ರಚಿಸಲ್ಪಟ್ಟ ಹೈವೇ ಎಷ್ಟು ಎತ್ತರಕ್ಕಿತೆಂದರೆ ತಾನು ಕೃಷ್ಣನಾಯಕನ ಮನೆಯ ಮೇಲೆ ನಿಂತುಕೊಂಡಿರುವಂತೆ ಅನಿಸಿತು ಆನಂದನಿಗೆ. ರಸ್ತೆಯಿಂದ ಹನುಮಂತನಂತೆ ನೆಗೆದರೆ ಮಾಡಿನ ಮೇಲಕ್ಕೇ ಹೋಗಿ ನಿಲ್ಲಬಹುದೆಂಬಷ್ಟು ಸಮೀಪ ಮತ್ತು ರಸ್ತೆಯಿಂದ ಹತ್ತು ಅಡಿಗಳಷ್ಟಾದರೂ ತಗ್ಗಿನಲ್ಲಿ ಮಾಡು ಇತ್ತು. ಮಾರ್ಗದ ಬಳಿಯಲ್ಲೇ ಇದ್ದ ದೈತ್ಯಾಕಾರದ ಹುಣಿಸೆ ಮರದಿಂದ ಉದುರಿದ ಎಲೆಗಳು ಮಾಡಿನ ಮೇಲೆ ಅಲ್ಲಲ್ಲಿ ರಾಶಿಯಾಗಿ ನಿಂತಿದ್ದವು. ಮಾಡಿನ ಮೇಲೆ ಮಕ್ಕಳು ಬಿಸಾಡಿದ ಕಾಗದಗಳು, ಒಂದು ಬಟ್ಟೆಯಚೆಂಡು, ತೆಂಗಿನ ಮಡಲಿನ ಗರಿಗಳು, ಬೇರೆ ಬೇರೆ ಮರದ ಎಲೆಗಳು ಮತ್ತು ಅಲ್ಲಲ್ಲಿ ಹಿಂದಿನ ಮಳೆಗಾಲದಲ್ಲಿ ಬೆಳೆದು ಒಣಗಿ ಸತ್ತು ನಿಂತ ಹುಲ್ಲು. ಇವೆಲ್ಲವುಗಳ ಮೇಲೆ, ಮತ್ತು ಕಪ್ಪಾದ ಹಂಚುಗಳ ಮೇಲೆ ಮಾರ್ಗದಿಂದ ಹಾರಿಬಂದು ದಟ್ಟನೆ ಅಂಟಿದ ದೂಳು ಇತ್ತು. ಮಳೆ ಬರುತ್ತಿದ್ದರೆ ಈ ಕೊಳೆಯೆಲ್ಲಾ ಅಲ್ಲಿರುತ್ತಿರಲಿಲ್ಲ. ಮಳೆ ಇನ್ನೂ ಒಂದು ಹನಿಯೂ ಸುರಿದಿಲ್ಲವೆನಿಸಿತು.

    ರಸ್ತೆಯಿಂದ ಕೆಳಗಡೆ ಇಳಿಯಲು ಮಾಡಿದ್ದ ಅಗಲ ಕಿರಿದಾದ ಮೆಟ್ಟಲುಗಳಲ್ಲಿ ಜಾಗ್ರತೆಯಿಂದ ಇಳಿದುಕೊಂಡು ಕೃಷ್ಣನಾಯಕನ ಮನೆಯ ಅಂಗಳಕ್ಕೆ ಬಂದ. ಅಲ್ಲೇ ಕೆಳಗಡೆ ಬಲಪಕ್ಕದಲ್ಲಿ ರಸ್ತೆಯಡಿಯಿಂದ ಹೋಗುತ್ತಿದ್ದ ತೋಡಿಗೆ ಇರಿಸಲಾದ ಉರುಟು ಸಿಮೆಂಟಿನ ತೂಬಿನೊಳಗಿಂದ ಯಾರೋ ಒಬ್ಬಳು ಮುದುಕಿ ಪಡುಗಡೆಗೆ ಹೋಗುತ್ತಿದ್ದವಳು ಒಮ್ಮೆ ಹಾಗೇ ನಿಂತು ಆಗಂತುಕನನ್ನು ಬೆರಗಿನಿಂದ ನೋಡಿದಳು. ತೋಡು ಒಣಗಿ, ಹರಳು ಕಲ್ಲು, ಉಸುಬು

    Enjoying the preview?
    Page 1 of 1